ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯದ ಕುರಿತು ಜನಾಭಿಪ್ರಾಯ (12/12/2017) : ಒಟ್ಟು : 6365798; ಪ್ರತ್ಯೇಕ ರಾಜ್ಯ ಬೇಕು : 5792877(91%), ಅಭಿವೃದ್ಧಿಯಾಗದಿದ್ದರೆ ಮಾತ್ರ ಪ್ರತ್ಯೇಕ ರಾಜ್ಯ ಬೇಕು : 2,15,630(6%) , ಪ್ರತ್ಯೇಕ ರಾಜ್ಯ ಬೇಡ : 357291 (3%)

ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ..ಎರಡು ಕರ್ನಾಟಕ ಆಗೋದು ಅನಿವಾರ್ಯ ..!

ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಎಚ್ಚರಿಕೆ
ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗೆ ಮುಂದುವರೆದರೆ ಉತ್ತರ ಕರ್ನಾಟಕ ಪ್ರತ್ಯೆಕ ರಾಜ್ಯದ ಕೂಗಿಗೆ ಎಲ್ಲರ ಧ್ವನಿಗೂಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಮೈಸೂರು ಭಾಗದವರೇ ಹೆಚ್ಚಿನ ಸಚಿವರು ಇದ್ದಾರೆ. ಉತ್ತರ ಕರ್ನಾಟಕದ ಶಾಸಕರನ್ನ ಕಡೆ ಗಣಿಸಿ ಮೈಸೂರು ಬಾಗದ ಸಚಿವರಿಗೆ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದವರಿಗೆ‌ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ ಅನುದಾನ ನೀಡುವಲ್ಲಿ ಸಹ ತಾರತಮ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮುಂದಿನ ಅಧಿವೇಶನದೊಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಎದ್ದಿರುವ ಅಸಮಾಧಾನದ ಧ್ವನಿ ಹೆಚ್ಚಾಗಬೇಕು. ನಾವು ಉತ್ತರ ಕರ್ನಾಟಕ್ಕೆ ಆಗಿರುವ ತಾರತಮ್ಯದ ವಿರುದ್ಧ ಹೋರಾಟ ಆರಂಭಿಸಬೇಕಾಗುತ್ತದೆ. ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದ್ದಲ್ಲಿ ಎರಡು ಕರ್ನಾಟಕ ಆಗೋದು ಅನಿವಾರ್ಯ ಆಗುತ್ತೇ ಎಂದು ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ನೀಡಿದರು.

Share on Google Plus

Nagesh Golashetti

ನಾನು ನಾಗೇಶ್ ಗೋಲಶೆಟ್ಟಿ ಉತ್ತರಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ವೆಬ್ಸೈಟ್ ನಲ್ಲಿ ಸಮಿತಿಯ ಚಟುವಟಿಕೆಗಳನ್ನು ಸಚಿತ್ರವಾಗಿ ವಿವರಿಸುತ್ತೇನೆ ಮತ್ತು ಆಡಿಯೋ, ವಿಡಿಯೋಗಳನ್ನೂ ಕೂಡ ಹಂಚಿಕೊಳ್ಳುತ್ತೇನೆ. ತಾವು ವೀಕ್ಷಿಸಿ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.