ಉತ್ತರ ಕರ್ನಾಟಕ ಹೋರಾಟ ಸಮಿತಿಯನ್ನು ದಿನಾಂಕ 20-04-2016 ರಂದು ಉತ್ತರ ಕರ್ನಾಟಕದ ಮಧ್ಯವರ್ತಿ ಸ್ಥಳ ಬಾಗಲಕೋಟೆಯಲ್ಲಿ ನೊಂದಾಯಿಸಲಾಯಿತು. ಪ.ಪೂ.ಶ್ರೀ ಪ್ರಭು (ಪಂಚಮಶಿವಲಿಂಗೇಶ್ವರ) ಮಹಾಸ್ವಾಮೀಜಿಗಳು, ಚರಂತಿಮಠ, ಬಾಗಲಕೋಟೆ ಹಾಗೂ ಸಿದ್ಧಸಂಸ್ಥಾನಮಠ ನಿಡಸೋಸಿ ಇವರ ಗೌರವಾಧ್ಯಕ್ಷತೆ ಹಾಗೂ ಖ್ಯಾತ ಮಾಹಿತಿ ಹಕ್ಕು ಹೋರಾಟಗಾರ ಶ್ರೀ ಭೀಮಪ್ಪ ಗುಂ.ಗಡಾದ ಇವರ ಅಧ್ಯಕ್ಷತೆಯಲ್ಲಿ ಉತ್ತರ ಕರ್ನಾಟಕ ಭಾಗದ ೧೩ ಜಿಲ್ಲೆಗಳಿಂದ ಹೋರಾಟಗಾರರು ಸೇರಿಕೊಂಡು ರಾಜ್ಯ ಘಟಕವನ್ನು ರಚಿಸಲಾಯಿತು. ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಕಾನೂನಾತ್ಮಕವಾಗಿ ಹೋರಾಡುವುದು ಈ ಸಮಿತಿಯ ಉದ್ದೇಶ. ಸುಮಾರು ೬೦ ವರ್ಷಗಳಿಂದ ಉತ್ತರ ಕರ್ನಾಟಕವು ತಾರತಮ್ಯ ಹಾಗೂ ಮಲತಾಯಿ ಧೋರಣೆಯಿಂದ ಹಿಂದೆ ಉಳಿದಿರುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಇದನ್ನು ಸರಿಪಡಿಸಲು ಅನೇಕ ಸಂಘ ಸಂಸ್ಥೆಗಳು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಕೆಲವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವೇ ಆಗಬೇಕು ಎಂದರೆ, ಇನ್ನು ಕೆಲವರು ಅಭಿವೃದ್ದಿಗಾಗಿ ಹೋರಾಟ ಮಾಡಿ, ಅಭಿವೃದ್ಧಿ ಮಾಡದಿದ್ದರೆ ಪ್ರತ್ಯೇಕತೆಗೆ ಹೋರಾಟ ಮಾಡಿ ಎಂಬುವರಿದ್ದಾರೆ. ಹಾಗೇನೇ ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯ ಬೇಡ ಎಂಬ ಭಾವನಾತ್ಮಕ ಜೀವಿಗಳು ಇದ್ದಾರೆ. ಈ ಗೊಂದಲಗಳ ಮಧ್ಯೆ ಉ. ಕ. ಹೋ. ಸ. ಒಂದು ನಿರ್ಣಯಕ್ಕೆ ಬಂದಿದ್ದು, ಉತ್ತರ ಕರ್ನಾಟಕ ಭಾಗದ ೨ ಕೋಟಿ ೬೦ ಲಕ್ಷ ೮ ಸಾವಿರ ೩೯೮ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಬಹುಜನರ ಅಭಿಪ್ರಾಯದಂತೆ ಸಮಿತಿಯೂ ಹೋರಾಟದ ರೂಪುರೇಷೆಯನ್ನು ಸಿದ್ದಪಡಿಸಲಿದೆ. ಈ ನಿಟ್ಟಿನಲ್ಲಿ ಲಿಖಿತ ರೂಪದ ಸಹಿಯೊಂದಿಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ.